ವ್ಯಕ್ತಿಯೊಬ್ಬನ ವಿಚಾರಣೆ ಅಥವಾ ತನಿಖೆ ನಡೆಯುವಾಗ ಅವನು ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಸೌಮ್ಯವಾಗಿ ಸೌಜನ್ಯತೆಯಿಂದ ಉತ್ತರಿಸುತ್ತಾನೆಯೇ ಹೊರತು ಶಿವಕುಮಾರ್ ನಂತೆ ಗೂಂಡಾಗಳ ಹಾಗಲ್ಲ ಎಂದು ಈಶ್ವರಪ್ಪ ಹೇಳಿದರು. ತನ್ನ ವಿರುದ್ಧ ಆಪಾದನೆ ಮಾಡಿದವರ ಹಗರಣಗಳನ್ನು ಬಿಚ್ಚಿಡುತ್ತೇನೆ ಅಂತ ಆರ್ಭಟಿಸಿದ್ದ ಯಾಕೆ ಸುಮ್ಮನಿದ್ದಾರೆ ಎಂದು ಬಿಜೆಪಿ ನಾಯಕ ಪ್ರಶ್ನಿಸಿದರು.