ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ

ರಸ್ತೆಯೊಂದರಲ್ಲಿ ಕಾರಿನ ಮಾಲೀಕ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ನಡೆದ ಸಂಭಾಷಣೆ ಇದೀಗ ವೈರಲ್ ಆಗಿದೆ. ಸಾಮಾನ್ಯವಾಗಿ ಕಾರುಗಳಿಗೆ ಕಪ್ಪು ಗ್ಲಾಸ್​ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ನಾನು ದಂಡ ಹಾಕುತ್ತೇನೆ ಆದರೆ ಈ ಬಾರಿ ನಾಯಿ ಮುಖ ನೋಡಿ ನಿಮ್ಮನ್ನು ಹೋಗಲು ಬಿಡುತ್ತಿದ್ದೇನೆ. ಯಾಕೆದರೆ ನನಗೆ ನಾಯಿ ಕಂಡರೆ ಭಯ ಎಂದು ಪೊಲೀಸರು ಮಾಲೀಕನ ಬಳಿಕ ಬೆರಳು ಮಾಡಿ ತೋರಿಸಿ ಮಾತನಾಡುತ್ತಿರುವಾಗ ಅದು ಬೊಗಳುತ್ತಿರುವುದು ಕಂಡುಬಂತು. ಇದು ಸುಪ್ರೀಂಕೋರ್ಟ್​ನ ಆದೇಶವಾಗಿರುವುದರಿಂದ ಯಾವುದೇ ಕಾರಣಕ್ಕೆ ಬ್ಲ್ಯಾಕ್​ ಗ್ಲಾಸ್​ನ್ನು ಕಾರಿಗೆ ಅಳವಡಿಸಬೇಡಿ, ಕೂಡಲೇ ಅದನ್ನು ತೆಗೆದುಹಾಕಿ ಎಂದು ಪೊಲೀಸರು ಹೇಳಿದ್ದಾರೆ. ಈ ನಾಯಿಯೇ ನಿನ್ನನ್ನು ಉಳಿಸಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಾಯಿ ಮುಂದೆ ಎಲ್ಲರೂ ತಲೆ ಬಾಗಬೇಕಾಗುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ.