ವಿಶ್ವದ ನಾಯಕತ್ವ ವಹಿಸುವ ಮಹತ್ವದ ಜವಾಬ್ದಾರಿಯನ್ನು ಈ ಬಾರಿ ಭಾರತ ನಿಭಾಯಿಸುತ್ತಿದೆ. ಸೆಪ್ಟಂಬರ್ ನಲ್ಲಿ ನಡೆಯಲಿರುವ G20 ಸಮಾವೇಶದ ನೇತೃತ್ವವನ್ನು ಭಾರತ ವಹಿಸಿಕೊಂಡಿದೆ. ಸೆಪ್ಟಂಬರ್ ನಲ್ಲಿ ಮಹಾ ಅಧಿವೇಶನಕ್ಕೆ ನವದೆಹಲಿಯ ಪ್ರಗತಿ ಮೈದಾನ ಅದ್ಧೂರಿಯಾಗಿ ಸಿದ್ಧಗೊಳ್ಳುತ್ತಿದೆ. ನವದೆಹಲಿಯ ಪ್ರಗತಿ ಮೈದಾನದ ಪುನರಾಭಿವೃದ್ಧಿಗೊಂಡ ITPO ಸಂಕೀರ್ಣವನ್ನು (Redeveloped ITPO Complex For G20 Leaders Meet) ಪ್ರಧಾನಿ ನರೇಂದ್ರ ಮೋದಿ (PM Narendra Modi ) ನಾಳೆ ಬುಧವಾರ (July 26) ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಲೋಕಾರ್ಪಣೆ ಮಾಡುತ್ತಿರುವ ಪ್ರಗತಿ ಮೈದಾನದ ಸಭಾಂಗಣ ಭಾರತದ ಅತಿದೊಡ್ಡ ಸಭಾಂಗಣ ಎನಿಸಿಕೊಳ್ಳಲಿದ್ದು, ವಿಶ್ವದರ್ಜೆಯ ತಂತ್ರಜ್ಞಾನ ಹೊಂದಿದೆ. ಜರ್ಮನಿಯ ಹ್ಯಾನೋವರ್ ಎಕ್ಸಿಬಿಷನ್ ಸೆಂಟರ್, ಶಾಂಘೈನಲ್ಲಿರುವ ನ್ಯಾಷನಲ್ ಎಕ್ಸಿಬಿಷನ್ ಮತ್ತು ಕನ್ವೆನ್ಷನ್ ಸೆಂಟರ್ ನಂತಹ ಬೃಹತ್ ಸಂಕೀರ್ಣಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮೂಲಸೌಕರ್ಯವು ವಿಶ್ವ ದರ್ಜೆಯ ಕಾರ್ಯಕ್ರಮಗಳನ್ನು ನಿರೂಪಿಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.