ಬಿಗ್​ ಬಾಸ್​ ಮನೆಯಲ್ಲಿ ಹರಿಯಿತು ಕಣ್ಣೀರ ಹೊಳೆ; ಇಂಥ ಪರಿಸ್ಥಿತಿಗೆ ಕಾರಣ ಏನು?

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಹಲವು ವ್ಯಕ್ತಿತ್ವದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ಶೋ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇಲ್ಲಿಗೆ ಬರುವುದಕ್ಕೂ ಮುನ್ನ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದ ಈ ಸ್ಪರ್ಧಿಗಳು ಈಗ ಎಲ್ಲರನ್ನೂ ಬಿಟ್ಟು ದೊಡ್ಮನೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಎಲ್ಲವೂ ಕಟ್ಟುನಿಟ್ಟಾಗಿ ಇರುತ್ತದೆ. ಪ್ರತಿಯೊಂದು ವಿಷಯಕ್ಕೂ ಕಷ್ಟಪಡಬೇಕು. ಹಲವು ಸೌಕರ್ಯಗಳನ್ನು ತ್ಯಜಿಸಿ ಬದುಕಬೇಕು. ಇಂಥ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಕುಟುಂಬದವರು ನೆನಪು ಕಾಡುತ್ತದೆ. ಗೌರೀಶ್​ ಅಕ್ಕಿ, ತನಿಶಾ ಕುಪ್ಪಂಡ, ಈಶಾನಿ, ಸ್ನೇಹಿತ್​, ವಿನಯ್​ ಗೌಡ ಮುಂತಾದವರು ದೊಡ್ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ಈ ಎಪಿಸೋಡ್​ ‘ಕಲರ್ಸ್​ ಕನ್ನಡ’ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ 24 ಗಂಟೆಯೂ ಲೈವ್​ ನೋಡಬಹುದು.