ದ್ವಿಚಕ್ರವಾಹನ ಸವಾರನನ್ನು ಬೆನ್ನಟ್ಟಿರುವ ಕರಡಿಗಳು

ಚಿತ್ರದುರ್ಗ, ಕೊಪ್ಪಳ ಮತ್ತು ಬೇರೆ ಕೆಲ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿಗಳು ಓಡಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅವು ತಮ್ಮ ಪಾಡಿಗೆ ತಾವು ಓಡಾಡಿಕೊಂಡಿರುವುದು ನಿಜವಾದರೂ ಮಾನವರನ್ನ ಕಂಡರೆ ತಮ್ಮ ಅತ್ಮರಕ್ಷಣೆಗಾಗಿ ದಾಳಿ ನಡೆಸುತ್ತವೆ. ಹಾಗಾಗಿ, ಕರಡಿಗಳು ಊರಿನ ಸುತ್ತಮುತ್ತ ಕಂಡಾಗ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದೇ ಜಾಣ್ಮೆಯ ಕೆಲಸ.