ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ

ಮೊದಲ ಶುಕ್ರವಾರ ಕಂಡ ನೂಕುನುಗ್ಗಲು ಈ ಶುಕ್ರವಾರ ಕಾಣುತ್ತಿಲ್ಲ. ಭಕ್ತರು ಸದ್ಯಕ್ಕಂತೂ ಯಾವುದೇ ದೂರು ಹೇಳುತ್ತಿಲ್ಲ. ಕಳೆದ ಶುಕ್ರವಾರ ಕೆಲ ಗಣ್ಯರು ದೇವಿಯ ದರ್ಶನಕ್ಕೆ ತಮ್ಮ ಕುಟುಂಬ ಹಾಗೂ ಬೆಂಬಲಿಗರೊಂದಿಗೆ ಬಂದಾಗ ಸರತಿ ಸಾಲಿನಲ್ಲಿದ್ದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಗಣ್ಯರ ಜೊತೆ ಸುಮಾರು 50-60 ಹಿಂಬಾಲಕರು ನುಗ್ಗಿದಾಗ ಬೆಳಗಿನ ಜಾವದಿಂದ ದರ್ಶನಕ್ಕೆ ನಿಂತವರಿಗೆ ಕೋಪ ಬರೋದು ಸಹಜವೇ.