ಸುವರ್ಣ ಮಹೋತ್ಸವವನ್ನು ಸಿದ್ದರಾಮಯ್ಯ ನಿನ್ನೆ ಐತಿಹಾಸಿಕ ವಿಜಯನಗರದ ಹಂಪಿಯಲ್ಲಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದ್ದಾರೆ ಎಂದು ಹೇಳಿದ ಶಿವಕುಮಾರ್ ಅದರ ಮುಂದುವರಿದ ಭಾಗವಾಗಿ ಗದಗನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಸುವರ್ಣ ಮಹೋತ್ವವದ ನೆನಪಿಗಾಗಿ ತಾಯಿ ಭುವನೇಶ್ವರಿ ಭವನ ನಿರ್ಮಿಸಲು ನಿರ್ಧರಿಸಲಾಗಿದೆ ಮತ್ತು ಅದಕ್ಕಾಗಿ ಜಾಗದ ಶೋಧ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.