ನಿರಂತರ ಮಳೆಗೆ ಕುಸಿಯುತ್ತಿರುವ ದೇವಿಮನೆ ಘಟ್ಟ ಭಾಗದ ಗುಡ್ಡ

ನಿರಂತರ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವಿಮನೆ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 766E ಮೇಲೆ ಗುಡ್ಡ ಕುಸಿದಿದೆ. ನಿನ್ನೆ ರಾತ್ರಿ ಕುಸಿದ ಗುಡ್ಡದ ಮಣ್ಣು ತೆರವು ಮಾಡುವಷ್ಟರಲ್ಲಿ ಬೆಳಿಗ್ಗೆ ಮತ್ತೆ ಕುಸಿದಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ.