ರಾಜ್ಯ ರಾಜಾಧಾನಿಯಲ್ಲಿ ಬೆಂಗಳೂರಿನಲ್ಲಿ ಈಗಾಗಲೇ ಕಳೆದ ಕೆಲದಿನಗಳಿಂದ ಮಳೆಯಾಗುತ್ತಿದೆ. ಅದೇ ರೀತಿಯಾಗಿ ಇಂದು ಕೂಡ ನಗರದ ಹಲವೆಡೆ ಮಳೆ ಆಗಿದೆ. ಬೆಂಗಳೂರಿನ ಪೀಣ್ಯ, ದಾಸರಹಳ್ಳಿ, ನೆಲಮಂಗ ಸುತ್ತಮುತ್ತ ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ಜಾಮ್ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೀವ್ರ ಪರದಾಡಿದ್ದಾರೆ.