‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ

ತವರು ನೆಲದಲ್ಲಿ ಪಂದ್ಯವನ್ನಾಡುತ್ತಿರುವ ರಾಹುಲ್​ಗೆ ಅಭಿಮಾನಿಗಳ ಬರಪೂರ ಬೆಂಬಲ ಸಿಗುತ್ತಿದೆ. ರಾಹುಲ್ ಮೈದಾನಕ್ಕೆ ಕಾಲಿಟ್ಟ ಕೂಡಲೇ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟುತ್ತಿದೆ. ಅಂತಹದ್ದೇ ಘಟನೆಯೊಂದು ಈ ಪಂದ್ಯದ ಸಮಯದಲ್ಲಿ ನಡೆದಿದ್ದು, ರಾಹುಲ್ ಮೈದಾನಕ್ಕೆ ಕಾಲಿಟ್ಟ ಕೂಡಲೇ ಅಭಿಮಾನಿಗಳೆಲ್ಲ ‘ಆರ್​ಸಿಬಿ ನಾಯಕ ಕೆಎಲ್ ರಾಹುಲ್’ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.