ಸ್ಪಂದನಾ ವಿಜಯ್ ರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದು ಬಹಳ ನೋವಿನ ಸಂಗತಿ. ಸ್ಪಂದನಾ ಅವರ ಅಗಲಿಕೆ ಬಳಿಕ ವಿಜಯ್ ರಾಘವೇಂದ್ರ ಅವರ ಕುಟುಂಬದಲ್ಲಿ ದುಃಖ ಆವರಿಸಿದೆ. ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಯ ಮಗ ಶೌರ್ಯ ಕೂಡ ಕಣ್ಣೀರು ಹಾಕುತ್ತಿದ್ದಾನೆ. ಇಂದು (ಆಗಸ್ಟ್ 16) ಸ್ಪಂದನಾ ವಿಜಯ್ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆದಿವೆ. ಈ ವೇಳೆ ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ ಶ್ರೀಮುರಳಿ ಪತ್ನಿ ವಿದ್ಯಾ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. ಬಳಿಕ ಮಲ್ಲೇಶ್ವರದ ಮೈದಾನದಲ್ಲಿ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಯಿತು.