ಸುಮಲತಾ ಬಿಜೆಪಿ ಕಡೆ ವಾಲುವ ಮೊದಲು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಕಳಪೆ ಕಾಮಗಾರಿ ಸಂಬಂಧಿಸಿದಂತೆ ಅವರ ಮತ್ತು ಪ್ರತಾಪ್ ಸಿಂಹ ನಡುವೆ ವಾಗ್ದಾಳಿ ನಡೆಯುತಿತ್ತು. ಹಾಗಾಗಿ, ಅವರು ಪರಸ್ಪರ ಎದುರಾದಾಗ ಅವರಿಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ನೋಡುವ ಕಾತುರ ಎಲ್ಲರಿಗೂ ಇರುತ್ತದೆ. ಆದರೆ, ಇಂಥ ಸಂದರ್ಭಗಳಲ್ಲಿ ಅವರು ಒಬ್ಬರನ್ನೊಬ್ಬರು ಅವಾಯ್ಡ್ ಮಾಡುವ ಪ್ರಯತ್ನ ಮಾಡುತ್ತಾರೆ.