ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಡಿ ನೋವಿನ ಸಮಸ್ಯೆ ಇರುವುದರಿಂದ, ವಿಧಾನಸಭೆಗೆ ಅವರ ಸುಲಭ ಪ್ರವೇಶಕ್ಕಾಗಿ ವೀಲ್ಚೇರ್ ಬಳಕೆಗೆ ಅನುಕೂಲವಾಗುವಂತೆ ಹಲವು ಕಡೆ ರ್ಯಾಂಪ್ಗಳನ್ನು ಅಳವಡಿಸಲಾಗಿದೆ. ವಿಧಾನಸೌಧ ಲಾಂಜ್, ಆಡಳಿತ ಪಕ್ಷದ ಮೊಗಸಾಲೆ ಮತ್ತು ವಿಧಾನಸಭೆ ಪ್ರವೇಶ ದ್ವಾರದಲ್ಲಿ ರಾಂಪ್ಗಳನ್ನು ನಿರ್ಮಿಸಲಾಗಿದೆ. ರಾಜ್ಯಪಾಲರನ್ನು ಸ್ವಾಗತಿಸಲು ವಿಧಾನಸಭೆ ಪೂರ್ವ ಮೊಗಸಾಲೆಯಲ್ಲಿಯೂ ರಾಂಪ್ ಇದೆ.