ಸಿಎಂ ಸಿದ್ದರಾಮಯ್ಯ ವ್ಹೀಲ್ ಚೇರ್​​ನಲ್ಲಿ ಹೋಗಲು ವಿಧಾನಸೌಧದಲ್ಲಿ ರ‍್ಯಾಂಪ್ ಅಳವಡಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಡಿ ನೋವಿನ ಸಮಸ್ಯೆ ಇರುವುದರಿಂದ, ವಿಧಾನಸಭೆಗೆ ಅವರ ಸುಲಭ ಪ್ರವೇಶಕ್ಕಾಗಿ ವೀಲ್‌ಚೇರ್ ಬಳಕೆಗೆ ಅನುಕೂಲವಾಗುವಂತೆ ಹಲವು ಕಡೆ ರ‍್ಯಾಂಪ್​ಗಳನ್ನು ಅಳವಡಿಸಲಾಗಿದೆ. ವಿಧಾನಸೌಧ ಲಾಂಜ್, ಆಡಳಿತ ಪಕ್ಷದ ಮೊಗಸಾಲೆ ಮತ್ತು ವಿಧಾನಸಭೆ ಪ್ರವೇಶ ದ್ವಾರದಲ್ಲಿ ರಾಂಪ್‌ಗಳನ್ನು ನಿರ್ಮಿಸಲಾಗಿದೆ. ರಾಜ್ಯಪಾಲರನ್ನು ಸ್ವಾಗತಿಸಲು ವಿಧಾನಸಭೆ ಪೂರ್ವ ಮೊಗಸಾಲೆಯಲ್ಲಿಯೂ ರಾಂಪ್ ಇದೆ.