ಮನೆಯಲ್ಲಿ ಒಂಟಿಯಾಗಿದ್ದಾಗ ಮೂರನೇ ಮಹಡಿಯ ಕಿಟಕಿಯಿಂದ ನೇತಾಡುತ್ತಿದ್ದ ಮಗುವನ್ನು ರಕ್ಷಿಸಿದ ಪುಣೆ ಅಗ್ನಿಶಾಮಕ ದಳದ ಸಿಬ್ಬಂದಿ ಯೋಗೇಶ್ ಅರ್ಜುನ್ ಚವಾಣ್ ಅವರ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ, ನೆರೆಮನೆಯ ಉಮೇಶ್ ಸುತಾರ್ ಅವರು ಆ ಮಗುವನ್ನು ಕಂಡು ಕಿರುಚಿದಾಗ ಅದೇ ಕಟ್ಟಡದಲ್ಲಿ ವಾಸವಾಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಜುನ್ ಬೀಗ ಹಾಕಿದ ಮೂರನೇ ಮಹಡಿಯ ಫ್ಲಾಟ್‌ನ ಕಿಟಕಿಯಲ್ಲಿ ಅನಿಶ್ಚಿತವಾಗಿ ಸಿಲುಕಿಕೊಂಡಿದ್ದ ಮಗುವನ್ನು ಕಾಪಾಡಿದ್ದಾರೆ.