ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಬಂದ ಈ ದೇಶದ ಸಚಿವರೆಷ್ಟು ಮಂದಿ

ಪ್ರಧಾನಿ ನರೇಂದ್ರ ಮೋದಿ ಟ್ರನಿಡಾಡಾ ಹಾಗೂ ಟೊಬಾಗೋ ಭೇಟಿಗೆ ತೆರಳಿದ್ದಾರೆ. ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಪ್ರಧಾನಿ ಕಮಲಾ, 38 ಸಚಿವರು ನಾಲ್ಕು ಸಂಸದರು ಮೋದಿ ಸ್ವಾಗತಕ್ಕೆಂದು ಏರ್​ಪೋರ್ಟ್​ ತೆರಳಿದ್ದರು. ಇದು ಭಾರತ ಹಾಗೂ ಈ ದೇಶದ ನಡುವಿನ ಸಂಬಂಧ ಹೇಗಿದೆ ಎಂಬುದನ್ನು ತೋರಿಸುತ್ತದೆ. ಇಡೀ ಸಚಿವ ಸಂಪುಟವೇ ಮೋದಿ ಸ್ವಾಗತಕ್ಕೆಂದು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು ಎಂದು ಕರೆದಿದ್ದಾರೆ.