ಕೋಗಿಲೆ ಮೊಟ್ಟೆಯನ್ನು ತೆಗೆದು ಕಾಗೆ ಗೂಡಲ್ಲಿ ಇಡುತ್ತದೆ. ಕಾಗೆ ಕಾವು ಕೊಟ್ಟು ಮರಿ ಮಾಡುತ್ತದೆ. ಆ ಮರಿಯನ್ನು ಕಾಗೆಯೇ ದೊಡ್ಡ ಮಾಡುತ್ತದೆ. ಆ ಬಳಿಕ ಅದಕ್ಕೆ ನಿಜವಿಚಾರ ಗೊತ್ತಾಗುತ್ತದೆ. ಹೀಗೊಂದು ಮಾತನ್ನು ಎಲ್ಲರೂ ಹೇಳುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲೂ ವರ್ತೂರು ಸಂತೋಷ್ ಅವರು ಇದೇ ಕಥೆ ಹೇಳಿದ್ದಾರೆ. ಇದನ್ನು ಕೇಳಿದ ಕಾರ್ತಿಕ್ ಮಹೇಶ್ಗೆ ಸಖತ್ ಗೊಂದಲ ಆಗಿದೆ. ಸಂತೋಷ್ ತಮ್ಮನ್ನೇ ಉದ್ದೇಶ ಹೇಳಿದ ಕಥೆ ಎಂಬುದು ಅವರಿಗೆ ಗೊತ್ತಾಗಿದೆ. ಇಲ್ಲಿ ಕಾಗೆ ಯಾರು, ಕೋಗಿಲೆ ಯಾರು ಎನ್ನುವ ಪ್ರಶ್ನೆ ಅವರಿಗೆ ಮೂಡಿದೆ.