ರಮೇಶ್ ಗೌಡ, ಜೆಡಿಎಸ್ ಮುಖಂಡ

ಪೋಸ್ಟರ್ ಹಚ್ಚಿದ ಕಾಂಗ್ರೆಸ್ ಮುಖಂಡನ ಹೆಸರು ಎಸ್ ಮನೋಹರ್ ಅಂತ ಹೇಳಿದ ರಮೇಶ್ , ಅವರ ಪೋಸ್ಟರ್ ಮಾಧ್ಯಮಗಳಿಗೆ ತೋರಿಸಿ ಅವನೊಬ್ಬ ಲೋಫರ್ ಎಂದರು. ಮನೋಹರ್, ಪೋಸ್ಟರ್ ಗಳನ್ನು ಅಂಟಿಸಿದ ಉದ್ದೇಶ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವುದಾಗಿತ್ತು. ಅವರು ಕೆರಳಿ ದಾಂಧಲೆ ಮಾಡುವಂತಾಗಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿಸುವುದು ಅವನ ಗುರಿಯಾಗಿತ್ತು ಎಂದು ರಮೇಶ್ ಗೌಡ ಹೇಳಿದರು.