ರಾಮೇಶ್ವರಂ ಕೆಫೆಯಲ್ಲಿ ಎನ್ ಎಸ್ ಜಿ ಕಮಾಂಡೋಗಳು

ಪೊಲೀಸ್ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಬ್ಯಾಗನ್ನು ಕೆಫೆಯಲ್ಲಿಟ್ಟ ಯುವಕನೊಬ್ಬನ ಸಿಸಿಟಿವಿ ಫುಟೇಜ್ ನಿನ್ನೆಯೇ ಲಭ್ಯವಾಗಿದ್ದು ಅವನನ್ನು ಪತ್ತೆಹಚ್ಚುವ ಕೆಲಸ ನಡೆದಿದೆ. ಅವನು ಕೆಫೆಯ ಡಸ್ಟ್ ಬಿನ್ ಒಂದರ ಬಳಿ ಬಾಂಬ್ ಗಳಿದ್ದ ಬ್ಯಾಗನ್ನು ಇಡುವ ಮೊದಲು ತಿಂಡಿ ತಿಂದಿದ್ದಾನೆ. ಏತನ್ಮಧ್ಯೆ, ಸಿಸಿಬಿ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.