ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ

ರಾಜ್ಯ ವಿಧಾನಸಭೆಗೆ 2023 ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೈಲಿ ಸೋಲು ಅನುಭವಿಸಿದರೂ ಮುಂದಿನ ಅಸೆಂಬ್ಲಿ ಇಲ್ಲವೇ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆಯುವ ಬಗ್ಗೆ ಪ್ರೀತಂ ಗೌಡ ವಿಶ್ವಾಸ ಹೊಂದಿದ್ದಾರೆ. ಅಸೆಂಬ್ಲಿಗೆ ಇಲ್ಲದಿದ್ದರೆ ವಿಧಾನ ಪರಿಷತ್, ಸಂಸತ್ ಇಲ್ಲದಿದ್ದರೆ ರಾಜ್ಯಸಭಾ ಸದಸ್ಯ ಆಗೇ ಆಗುತ್ತೇನೆ ಎಂದು ಅವರು ಖಚಿತವಾದ ಧ್ವನಿಯಲ್ಲಿ ಹೇಳುತ್ತಾರೆ.