ಏರ್ಪೋಟ್ ನಲ್ಲಿ ಕೆಲ ಮಾಧ್ಯಮದವರು ಬೈಟ್ ಕೇಳಿದಾಗ, ಪದೇಪದೆ ಬೈಟ್ ಕೊಡುವಂಥದ್ದೇನಿರುತ್ತದೆ ಅಂತ ಸಿಡುಕಿದರು. ಸರ್, ದುಬೈ ಪ್ರವಾಸದ ಬಗ್ಗೆ ಅಂತ ಕೇಳಿದಾಗ; ಅಲ್ಲಿನ ಕೆಂಪೇಗೌಡ ಸಂಘದವರು ಚಿಕ್ಕದೊಂದು ಕಾರ್ಯಕ್ರಮ ಇಟ್ಕೊಂಡಿದ್ದಾರೆ, ಅದರಲ್ಲಿ ಭಾಗಹಿಸಲು ಹೋಗುತ್ತಿರುವುದಾಗಿ ಹೇಳಿದರು. ಅದೇ ಸಂಘದವರು ಒಕ್ಕಲಿಗರಲ್ಲದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಆಮಂತ್ರಣ ನೀಡಿದ್ದಾರೆಯೇ? ಗೊತ್ತಿಲ್ಲ ಸ್ವಾಮಿ!