‘ಹುಚ್ಚ’ ಸಿನಿಮಾ ನಿರ್ಮಾಪಕ ರೆಹಮಾನ್ ಅವರು ಇಂದು (ಜುಲೈ 10) ಸುದ್ದಿಗೋಷ್ಠಿ ಕರೆದರು. ಈ ವೇಳೆ ಸುದೀಪ್ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಸುದೀಪ್ ಅವರಿಂದ 35 ಲಕ್ಷ ರೂಪಾಯಿ ಲಾಸ್ ಆಗಿದೆ ಎಂದು ರೆಹಮಾನ್ ಹೇಳಿದ್ದಾರೆ. ‘ಹುಚ್ಚ ಸಿನಿಮಾ ಮುಗಿದ ಬಳಿಕ ಹಿಂದಿಯ ಸ್ವರ್ಗ್ ಸಿನಿಮಾ ರಿಮೇಕ್ ಮಾಡೋಣ ಎಂದು ಸುದೀಪ್ ಹೇಳಿದರು. ನಾನು ಓಕೆ ಎಂದೆ. 10 ಲಕ್ಷ ರೂಪಾಯಿ ಕೊಟ್ಟು ಹಕ್ಕನ್ನೂ ತಂದೆ. ಆದರೆ, ಸಿನಿಮಾ ಮುಂದಕ್ಕೆ ಹೋಗಲೇ ಇಲ್ಲ. ಅಂದಾಜ್ ಅಪ್ನಾ ಅಪ್ನಾ ರಿಮೇಕ್ ಮಾಡೋಣ ಎಂದರು. ಅದರ ಹಕ್ಕನ್ನೂ ತಂದೆ. ಅದೂ ಕ್ಯಾನ್ಸಲ್ ಆಯ್ತು. ಲಾವಾರಿಸ್ ಹಕ್ಕನ್ನೂ ತಂದೆ. ಅದು ಕೂಡ ಸೆಟ್ಟೇರಿಲ್ಲ. ಇದೆಲ್ಲದರಿಂದ 35 ಲಕ್ಷ ರೂಪಾಯಿ ನಷ್ಟ ಆಗಿದೆ’ ಎಂದಿದ್ದಾರೆ ರೆಹಮಾನ್.