ಬಿಗ್ ಬಾಸ್ನಲ್ಲಿ ಭರ್ಜರಿ ಸ್ಪರ್ಧೆ; ಹೊಸ ಟಾಸ್ಕ್ ನೋಡಿ ವೀಕ್ಷಕರಿಗೆ ಸಖತ್ ಖುಷಿ

ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿ ಮೂರು ವಾರ ಕಳೆದಿದೆ. ಪ್ರತಿ ವಾರ ಹೊಸ ಹೊಸ ಟಾಸ್ಕ್ ನೀಡಲಾಗುತ್ತಿದೆ. ಈ ವಾರ ಬಿಗ್ ಬಾಸ್ನಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ತಂಡಕ್ಕೆ ತನಿಷಾ ಕ್ಯಾಪ್ಟನ್. ಮತ್ತೊಂದು ತಂಡಕ್ಕೆ ನಮ್ರತಾ ಕ್ಯಾಪ್ಟನ್. ಎರಡೂ ತಂಡದವರ ಮಧ್ಯೆ ಸಖತ್ ಕಾಂಪಿಟೇಷನ್ ಇದೆ. ಎರಡೂ ತಂಡದವರಿಗೆ ಬಾಕ್ಸ್ ಉರುಳಿಸುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ನಮ್ರತಾ ಟೀಂ ಗೆದ್ದಿದೆ. ಜಿಯೋ ಸಿನಿಮಾದಲ್ಲೊಇ 24 ಗಂಟೆ ಲೈವ್ ನೋಡಲು ಅವಕಾಶ ಇದೆ.