ಸಿದ್ದರಾಮಯ್ಯ ಕೆಲದಿನಗಳಲ್ಲಿ ಸ್ಥಾನದಿಂದ ಕೆಳಗಿಳಿಯುತ್ತಾರೆ, ಹಾಗಾಗಿ ಅವರಿಗೆ ಸರ್ಕಾರ ಮತ್ತು ತಮ್ಮ ಸಚಿವರ ಮೇಲೆ ಹಿಡಿತವಿಲ್ಲ, ಎಲ್ಲರೂ ಲೂಟಿಯಲ್ಲಿ ತೊಡಗಿದ್ದಾರೆ, ಸಚಿನ್ ಪಾಂಚಾಳ್ ಸಾವು ಒಂದು ಕೊಲೆ, ಅವರ ಕುಟುಂಬಕ್ಕೆ ಈ ಸರ್ಕಾರದ ಮೇಲೆ ನಂಬಿಕೆಯಿಲ್ಲದ ಕಾರಣ ಪ್ರಧಾನಿ ಮತ್ತು ಗೃಹಸಚಿವರಿಗೆ ಪತ್ರ ಬರೆದಿದ್ದಾರೆ, ಕುಟುಣಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಅವರೊಂದಿಗೆ ನಿಲ್ಲುತ್ತದೆ ಎಂದು ಅಶೋಕ ಹೇಳಿದರು.