ಬಿಗ್ ಬಾಸ್ ಕನ್ನಡದಲ್ಲಿ ಬಕೆಟ್ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ. ಕಳೆದ ವಾರ ಸಂಗೀತಾ ಶೃಂಗೇರಿ ಅವರು ಕಾರ್ತಿಕ್ ಬಗ್ಗೆ ಆರೋಪ ಒಂದನ್ನು ಮಾಡಿದ್ದರು. ‘ಕಾರ್ತಿಕ್ ವಿನಯ್ಗೆ ಬಕೆಟ್ ಹಿಡಿಯುತ್ತಾರೆ’ ಎಂದು ಸಂಗೀತಾ ಹೇಳಿದರು. ಇದಕ್ಕೆ ಕಾರ್ತಿಕ್ ಸಿಟ್ಟಾಗಿದ್ದಾರೆ. ಈ ವಾರವೂ ಆ ಬಗ್ಗೆ ಚರ್ಚೆ ಜೋರಾಗಿದೆ. ಸಂಗೀತಾ, ತನಿಷಾ ಹಾಗೂ ಕಾರ್ತಿಕ್ ಮಧ್ಯೆ ಈ ವಿಚಾರಕ್ಕೆ ಜಗಳ ಜೋರಾಗಿದೆ. ಸೈಡ್ನಲ್ಲಿ ನಿಂತು ವಿನಯ್ ಅವರು ಇದನ್ನು ಎಂಜಾಯ್ ಮಾಡಿದ್ದಾರೆ.