ಬಿಗ್ಬಾಸ್ ಮನೆಯಲ್ಲಿ ಉಗ್ರಂ ಮಂಜು ತಮ್ಮದೇ ರೀತಿ ಆಟವಾಡುತ್ತಿದ್ದಾರೆ. ಮನೊರಂಜನೆ ಕೊಡುವ ಜೊತೆಗೆ ಜಾಣತನದ ಆಟವನ್ನೂ ಆಡುತ್ತಿದ್ದಾರೆ. ಇದೀಗ ಬಿಗ್ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಇತರೆ ಸ್ಪರ್ಧಿಗಳ ಏಕಾಗ್ರತೆ ಭಂಗ ಮಾಡುತ್ತಾ ಅವರು ಗೆಲ್ಲದಂತೆ ಮಾಡಿದ್ದಾರೆ. ಇದರಿಂದಾಗಿ ಕೆಲ ಆಟಗಾರರು ಉಗ್ರಂ ಮಂಜು ವಿರುದ್ಧ ಸಿಟ್ಟಾಗಿದ್ದಾರೆ. ಗೆಳತಿಯಾಗಿದ್ದ ಗೌತಮಿ ಅಂತೂ ಮಂಜು ವಿರುದ್ಧ ಬಹಳ ಸಿಟ್ಟಾಗಿದ್ದು, ನೀವು ನನ್ನೊಂದಿಗೆ ಮಾತನಾಡಬೇಡಿ ಎಂದು ಫುಲ್ ಗರಂ ಆಗಿದ್ದಾರೆ. ಬಿಗ್ಬಾಸ್ ಕನ್ನಡದ ಹೊಸ ಪ್ರೋಮೋ ಇಲ್ಲಿ ನೋಡಿ.