MLC ಭೋಜೇಗೌಡ್ರ Car number ಬಳಸಿ ಕದ್ದ ಕಾರುಗಳನ್ನ ಮಾರುತ್ತಿದ್ದ ಭೂಪ ಅಂದರ್

ಕೆಪಿಸಿಸಿ ಕಚೇರಿ ಪಕ್ಕದಲ್ಲೇ ಇರುವ ಐಕ್ಯೂ ಕಾರ್ ಶೋ ರೂಮ್​​ನಲ್ಲಿ MLC ಭೋಜೇಗೌಡರ ಕಾರು ನಂಬರ್ ಬಳಸಿ ಕದ್ದು ಕಾರುಗಳನ್ನ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಶೋ ರೂಮ್ ಮುಂದೆ MLC ಕಾರಿನ ನಂಬರ್ KA18 z5977 ಕಾರು ನಿಂತಿದ್ದನ್ನ ನೋಡಿದ ಭೋಜೇಗೌಡರ ಪಿಎ ಪೊಲೀಸರಿಗೆ ಮಾಹಿತಿ ನೀಡಿದ್ದರು.. ಪೊಲೀಸರು ಬಂದು ಶೋ ರೂಮ್ ಮಾಲೀಕರನ್ನ ವಿಚಾರಣೆ ಮಾಡಿದಾಗ ಅಸಲಿ ಕಹಾನಿ ಬಯಲಾಗಿದೆ. ಕದ್ದು ಕಾರುಗಳನ್ನ ತಂದು ಇಲ್ಲಿ ನಿಲ್ಲಿಸುತ್ತಿದ್ದರು.. ಅದಕ್ಕೆ ಯಾವುದೋ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಇದೀಗ ಒಬ್ಬ ಆರೋಪಿ ಮತ್ತು ಶೋ ರೂಮ್ ಮಾಲೀಕ ಶಹಬಾಜ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.