ಸುದೀಪ್ ಅವರು ಲೀಗಲ್ ನೋಟೀಸ್ ಕಳಿಸಿದ್ದಾರೆ. ಎಂ.ಎನ್. ಕುಮಾರ್ ಅವರಿಗೆ ವಾಟ್ಸಪ್ ಮೂಲಕ ನೋಟೀಸ್ ತಲುಪಿದೆ. ಆದರೆ ಅಧಿಕೃತವಾಗಿ ಅಂಚೆ ಮೂಲಕ ನೋಟೀಸ್ ಬಂದಿಲ್ಲ. ‘ನೋಟೀಸ್ ಬಂದರೆ ಅದನ್ನು ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ನೀಡುತ್ತೇನೆ. ಅವರು ಸಭೆ ಮಾಡುತ್ತಾರೆ. ಅವರು ಹೇಳುವ ತೀರ್ಮಾನಕ್ಕೆ ನಾನು ಬದ್ಧನಾಗಿ ಇರುತ್ತೇನೆ’ ಎಂದು ಎಂ.ಎನ್.ಕುಮಾರ್ ಹೇಳಿದ್ದಾರೆ.