ಬಸ್ಸಲ್ಲಿ ಪ್ರಯಾಣಿಸುತ್ತಿರುವ ಶಾಸಕ ಸಿಮೆಂಟ್ ಮಂಜು

ಶಾಸಕರು ಮಂತ್ರಿಗಳು ಸರ್ಕಾರೀ ಬಸ್ಸುಗಳಲ್ಲಿ ಪ್ರಯಾಣಿಸುವುದು ಹೊಸದೇನಲ್ಲ ಮತ್ತು ವಿಶೇಷವೂ ಅಲ್ಲ. ಯಾಕೆಂದರೆ ಇಂಥ ಹಲವಾರು ಪ್ರಸಂಗಗಳನ್ನು ನಾವು ನೋಡುತ್ತೇವೆ. ಹಿಂದೆ ಕಡೂರು ಶಾಸಕರಾಗಿದ್ದ ವೈಎಸ್​ವಿ ದತ್ತ ಮಂತ್ರಿಯಾದ ಬಳಿಕವೂ ಕೆಎಸ್​ಆರ್​​ಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಸಿಮೆಂಟ್ ಮಂಜು ತಮ್ಮ ಬಸ್ ಪ್ರಯಾಣವನ್ನು ಜನರ ಸಮಸ್ಯೆಗಳನನ್ನು ಆಲಿಸಲು ಬಳಸಿದ್ದು ಅಭಿನಂದನೀಯ.