ಕೆಲ ದಿನಗಳಿಂದ ಗ್ಯಾಪ್ ಕೊಟ್ಟಿದ್ದ ಮಳೆ, ಇಂದು ದಿಢೀರ್ ಸುರಿದಿದ್ದಕ್ಕೆ ಜನರ ಪರದಾಟ

ಕಾಫಿನಾಡು, ಮಲೆನಾಡು ಭಾಗದ ಹಲವೆಡೆ ಭಾರೀ ಮಳೆ. ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ಧಾರಾಕಾರ ಮಳೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ವರುಣದೇವ. ದಿಢೀರನೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ. ಜಯಪುರ, ಬಾಳೆಹೊನ್ನೂರು, ಮೇಗುಂದ ಭಾಗದಲ್ಲಿ ಭಾರೀ ಮಳೆ.