ಪ್ಯಾಲೆಸ್ತೀನ್ ಧ್ವಜ ಹಿಡಿಯುವುದನ್ನು ಸಮರ್ಥಿಸಿದ ಜಮೀರ್

ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ಕೆಲ ಮುಸ್ಲಿಂ ಯುವಕರು ಓಡಾಟ ನಡೆಸಿದ್ದ ಬಗ್ಗೆ ವರದಿಯಾಗಿತ್ತು. ಅದೇ ರೀತಿ ಕೋಲಾರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದರು. ಚಿತ್ರದುರ್ಗದಲ್ಲಿಯೂ ಈದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಗಿತ್ತು. ಪ್ಯಾಲೆಸ್ತೀನ್ ಧ್ವಜ ಹಿಡಿಯುವುದನ್ನು ಸಚಿವ ಜಮೀರ್ ಅಹ್ಮದ್​ ಖಾನ್ ಸಮರ್ಥನೆ ಮಾಡಿದ್ದಾರೆ.