‘ದೈವಾರಾಧನೆ ಬಗ್ಗೆ ಕಾಂತಾರ ಸಿನಿಮಾಗಿಂತಲೂ ಮುನ್ನ ಬೇರೆ ಚಿತ್ರಗಳಲ್ಲಿ ಕೂಡ ತೋರಿಸಲಾಗಿತ್ತು. ಇದು ಜನಪ್ರಿಯ ಆದಾಗ ಮೂಲ ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲದೇ ಇರುವವರು ಅದನ್ನು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅಣಕ ಮಾಡಿದಾಗ, ಅಪಹಾಸ್ಯ ಮಾಡಿದಾಗ ದೈವವನ್ನು ನಂಬುವ ನಮ್ಮಂಥವರಿಗೆ ಬೇಸರ ಆಗುತ್ತದೆ. ಮತ್ತೆ ಮತ್ತೆ ವೇದಿಕೆಗಳಲ್ಲಿ ಆ ರೀತಿ ಮಾಡಬಾರದು ಅಂತ ನಾನು ಮನವಿ ಮಾಡುತ್ತೇನೆ. ನಾವು ಕಾಂತಾರ ಮಾಡಿದಾಗ ಅದನ್ನು ಸಿನಿಮಾದ ರೀತಿ ಮಾಡಿಲ್ಲ. ಆ ಸಮುದಾಯದವರ ಸಹಾಯ ತೆಗೆದುಕೊಂಡು ಶ್ರದ್ಧೆಯಿಂದ, ನಿಜವಾಗಿ ದೈವದ ಸೇವೆ ಎಂಬ ಆಲೋಚನೆಯಲ್ಲಿ ಮಾಡಿದ್ದೆವು’ ಎಂದಿದ್ದಾರೆ ರಿಷಬ್ ಶೆಟ್ಟಿ.