Delhi Assembly Poll Results: ಎರಡು ಬಾರಿ ಸಂಸದರಾಗಿದ್ದ ಪರ್ವೇಶ್ ವರ್ಮಾ ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾಗುತ್ತಿದೆ. ಈಗ ಅವರು ಅರವಿಂದ್ ಕೇಜ್ರಿವಾಲ್ ರನ್ನು ಸೋಲಿಸಿರುವುದರಿಂದ ಸಿಎಂ ಕುರ್ಚಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇವರ ಕುಟುಂಬ ರಾಜಕೀಯ ಕ್ಷೇತ್ರದಲ್ಲಿದ್ದು ತಂದೆ ಸಾಹಿಬ್ ಸಿಂಗ್ ವರ್ಮಾ ಅವರು ಹಿಂದೆ ದೆಹಲಿಯ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರ ಚಿಕ್ಕಪ್ಪ ಎಂಸಿಡಿಯ ಸದಸ್ಯರಾಗಿದ್ದರು.