ಪ್ರಧಾನಿ ಮೋದಿಗೆ ತಾಯಿಯ ನೆನಪಿಗಾಗಿ ವಿಶೇಷ ರಾಖಿ ತಯಾರಿಸಿ ಕಟ್ಟಿದ ಬಾಲಕಿ

ನವದೆಹಲಿಯ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ರಕ್ಷಾಬಂಧನದ ಪ್ರಯುಕ್ತ ಸರದಿಯಲ್ಲಿ ತೆರಳಿ ಮೋದಿಗೆ ರಾಖಿ ಕಟ್ಟಿದ್ದಾರೆ. ತಾವೇ ವಿಶೇಷವಾಗಿ ರಾಖಿಯನ್ನು ತಯಾರಿಸಿ ಕಟ್ಟಿರುವ ವಿದ್ಯಾರ್ಥಿಗಳ ಉತ್ಸಾಹ ಕಂಡು ಮೋದಿ ಅತ್ಯಂತ ಸಂತೋಷ ಪಟ್ಟಿದ್ದಾರೆ.