ಹಳ್ಳಿ ಬಾಹುಬಲಿಯ ಭರ್ಜರಿ ಸಾಹಸ: ಏಕಾಂಗಿಯಾಗಿ 30 ಟನ್ ಕಬ್ಬು ಲೋಡ್ ಮಾಡಿದ ಯುವಕ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದ 22 ವರ್ಷದ ಯುವಕ ಏಕಾಂಗಿಯಾಗಿ 30 ಟನ್ ಕಬ್ಬನ್ನು 6.5 ಗಂಟೆಗಳಲ್ಲಿ ಟ್ರ್ಯಾಕ್ಟರ್‌ಗೆ ಲೋಡ್ ಮಾಡಿ ದಾಖಲೆ ನಿರ್ಮಿಸಿದ್ದಾನೆ. ಇದು ಸಾಮಾನ್ಯವಾಗಿ 20 ಜನರ ತಂಡ ಮಾಡುವ ಕೆಲಸ. ಆದರೆ ಆತ ಏಕಾಂಗಿಯಾಗಿ ಮಾಡಿದ್ದಾರೆ. ಅವನ ಸಾಧನೆಗೆ ಸ್ಥಳೀಯರು ಹಾರ ಹಾಕಿ ಸನ್ಮಾನಿಸಿದ್ದಾರೆ.