ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್

ಆಪರೇಷನ್ ಸಿಂಧೂರ್ ಕೇವಲ ಟ್ರೈಲರ್ ಅಷ್ಟೇ, ಸರಿಯಾದ ಸಮಯ ಬಂದಾಗ ಪೂರ್ಣ ಚಿತ್ರವನ್ನು ತೋರಿಸುತ್ತೇವೆ ಎಂದು ಭುಜ್​ ವಾಯುನೆಲೆಯಿಂದ ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ಪಾಕಿಸ್ತಾನಿ ಸೇನೆಯು ಈ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸಿತ್ತು. ಅವರ ದುಷ್ಟ ಯೋಜನೆಗಳನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿದ್ದವು.