ಕೆಲವು ಸಲ ಅವರ ನಡಿಗೆ ಜನಪ್ರಿಯತೆಯ ದ್ಯೋತಕ ಅನಿಸುತ್ತದೆ. ನಡಿಗೆಯಲ್ಲಿ ರಾಜಗಾಂಭಿರ್ಯ, ಗತ್ತು, ಗೈರತ್ತು! ತಾನು ನಾಡಿನ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರು ಹಾಗೆ ನಡೆಯುತ್ತಾರೆ, ಗತ್ತು-ಠೀವಿ ಪ್ರದರ್ಶಿಸುತ್ತಾರೆ ಅಂದ್ಕೋಬೇಡಿ. ವಿರೋಧ ಪಕ್ಷದ ನಾಯಕ (Leader of Opposition) ಆಥವಾ ಕೇವಲ ಶಾಸಕನಾಗಿದ್ದಾಗಲೂ ಅವರ ನಡಿಗೆ ಹೀಗೆಯೇ ಇತ್ತು.