ಭಕ್ತರ ಆರಾಧ್ಯ ದೈವ ಅಂತ ಕರೆಸಿಕೊಳ್ಳುವ ಮಂತ್ರಾಲಯದ ರಾಯರ ಆರಾಧನಾ ಮಹೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದೆ..ಆದ್ರೆ ತುಂಗಭದ್ರಾ ನದಿಯಲ್ಲಿ ನೀರಿಲ್ಲದ ಹಿನ್ನೆಲೆ ಭಕ್ತರಿಗೆ ಈ ಬಾರಿ ಪುಣ್ಯಸ್ನಾನದ ಸಮಸ್ಯೆ ಎದುರಾಗಲಿದೆ..ಮುಂಗಾರು ಕೈ ಕೊಟ್ಟ ಹಿನ್ನೆಲೆ ಇದರ ಬಿಸಿ ರಾಯರ ಭಕ್ತರಿಗೆ ತಟ್ಟಿದೆ... ಹೌದು ಭಕ್ತರ ಆರಾಧ್ಯ ದೈವ ಮಂತ್ರಾಲಯ ರಾಯರ ಆರಾಧನಾ ಮಹೋತ್ಸವಕ್ಕ ದಿನಗಣನೆ ಆರಂಭವಾಗಿದೆ..ರಾಯರ 352ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯದ ರಾಯರ ಮಠದಲ್ಲಿ ಸಕಲ ರೀತಿಯಲ್ಲಿ ಸಜ್ಜಾಗ್ತಿದೆ..ಈ ಬಗ್ಗೆ ಇಂದು ಮಂತ್ರಾಲಯ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ರಾಯರ ಆರಾಧನಾ ಮಹೋತ್ಸವದ ಮಾಹಿತಿ ನೀಡಿದ್ರು..ಆಗಸ್ಟ್ 29 ರಿಂದ ಸೆಪ್ಟೆಂಬರ್ 4 ರ ವರೆಗೆ ರಾಯರ ಆರಾಧನೆ ನಡೆಯಲಿದ್ದು,ಸಪ್ತರಾತ್ರೋತ್ಸವ ನಡೆಯಲಿದೆ..ರಾಯರ 352ನೇ ಮಹೋತ್ಸವದ ನಿಮಿತ್ತವಾಗಿ ಮಠದಲ್ಲಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ..ಆಗಸ್ಟ್ 31 ರಂದು ರಾಯರ ಪೂರ್ವಾರಾಧನೆ, ಸೆಪ್ಟೆಂಬರ್ 1ರಂದು ಮಧ್ಯಾರಾಧನೆ ಹಾಗೂ ಸೆ.2 ರಂದು ಉತ್ತರ ಆರಾಧನೆ ನಡೆಯಲಿದೆ..ಇದೇ ಮಹೋತ್ಸವದ ಅಂಗವಾಗಿ ಆಗಸ್ಟ್ 30 ರಂದು ಅಂಚೆ ಇಲಾಖೆಯಿಂದ ರಾಯರ ಭಾವಚಿತ್ರವಿರೊ ಅಂಚೆ ಚೀಟಿ ಬಿಗುಗಡೆ ಮಾಡಲಾಗ್ತಿದೆ ಎಂದು ಡಾ. ಸುಬುಧೇಂದ್ರ ತೀರ್ಥರು,ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಮಾಹಿತಿ ನೀಡಿದ್ದಾರೆ.