ರಸ್ತೆಗೆ ಮುಳ್ಳಿನ ಬೇಲಿ ಹಾಕಿದ ಜಮೀನು ಮಾಲೀಕ: ರಾತ್ರಿಯಿಂದ ಧರಣಿ ಕುಳಿತ ಜನ

ದಲಿತ ಕಾಲೋನಿಗೆ ರಸ್ತೆ ಇಲ್ಲದೇ ಜನರು ಪರದಾಡಿರುವಂತಹ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ನಡೆದಿದೆ. ರಸ್ತೆಗೆ ಜಮೀನು ಮಾಲೀಕ ಮುಳ್ಳಿನ ಬೇಲಿ ಹಾಕಿದ್ದು, ರಸ್ತೆಗಾಗಿ ದಲಿತ ಕಾಲೋನಿ ನಿವಾಸಿಗಳು ಹೋರಾಟ ಮಾಡುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.