ಶೂಟಿಂಗ್​ ಸೆಟ್​ನಲ್ಲಿ ಶಿವಣ್ಣ-ಯಶ್​ ಭೇಟಿ; ಇಬ್ಬರ ಲುಕ್​ ನೋಡಿ ಫ್ಯಾನ್ಸ್​ ಫಿದಾ

‘ರಾಕಿಂಗ್​ ಸ್ಟಾರ್​’ ಯಶ್​ ಅವರು ‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಚಿತ್ರೀಕರಣ ಆರಂಭ ಆಯಿತು. ಇನ್ನು, ನಟ ಶಿವರಾಜ್​ಕುಮಾರ್​ ಅವರು ಕೂಡ 131ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಬೆಂಗಳೂರಿನಲ್ಲಿ ಈ ಎರಡೂ ಸಿನಿಮಾಗಳ ಶೂಟಿಂಗ್​ ನಡೆಯುತ್ತಿದೆ. ಎಚ್​ಎಂಟಿ ಗ್ರೌಂಡ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ ಬಿಡುವಿನಲ್ಲಿ ಯಶ್​ ಮತ್ತು ಶಿವಣ್ಣ ಅವರು ಭೇಟಿ ಆಗಿದ್ದಾರೆ. ಕೆಲವು ನಿಮಿಷಗಳ ಕಾಲ ಅವರು ಬ್ರೇಕ್​ ತೆಗೆದುಕೊಂಡು ಉಭಯ ಕುಶಲೋಪರಿ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಯಶ್​ ಮತ್ತು ಶಿವರಾಜ್​ಕುಮಾರ್​ ಅವರ ಗೆಟಪ್​ ಗಮನ ಸೆಳೆಯುತ್ತಿದೆ.