ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಉಗ್ರರು ನಡೆಸಿರುವ ದಾಳಿಗೆ ಭದ್ರತಾ ಲೋಪ ಕಾರಣ ಅಂತ ಹೇಳುವುದು ಸರಿಯಲ್ಲ, ಕೆಲವರ ಕುಯುಕ್ತಿಯಿಂದ ಅದು ನಡೆದಿದೆ. ಭಯೋತ್ಪಾದಕರು ಪೊಲೀಸರ ಡ್ರೆಸ್ ನಲ್ಲಿ ಬಂದು ದಾಳಿ ನಡೆಸಿದ್ದಾರೆ, ಜನಸಾಮಾನ್ಯರಿಗೆ ಅವರು ಪೊಲೀಸರಲ್ಲ, ಉಗ್ರರು ಅಂತ ಹೇಗೆ ಗೊತ್ತಾಗಬೇಕು? ರಾಜ್ಯ ಬಿಟ್ಟು ಹೊರಬಂದಿರುವ ಕಾಶ್ಮೀರಿ ಪಂಡಿತರನ್ನು ವಾಪಸ್ಸು ಕರೆತಂದು ನೆಲೆಗೊಳಿಸಿದ ಮೇಲೆ ಚುನಾವಣೆ ನಡೆಸಬೇಕಿತ್ತು ಎಂದು ಯತ್ನಾಳ್ ಹೇಳಿದರು.