ನಂತರ ಕಾಂಗ್ರೆಸ್ ಸರ್ಕಾರವನ್ನು ದೂರಿದ ರೇವಣ್ಣ, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷವು ದೇವೇಗೌಡರ ಕುಟುಂಬದ ವಿರುದ್ಧ ಹಗೆತನ ಸಾಧಿಸುತ್ತಿದೆ, ತಮ್ಮ ಕುಟುಂಬಕ್ಕೆ ಇದು ಹೊಸದೇನಲ್ಲ, ಈ ಹಿಂದೆಯೂ ತಮ್ಮ ಕುಟುಂಬದ ವಿರುದ್ಧ ಸಿಐಡಿ, ಸಿಓಡಿ, ಸಿಬಿಐಯಂಥ ಸಂಸ್ಥೆಗಳಿಂದ ತನಿಖೆಗಳನ್ನು ಮಾಡಿಸಲಾಗಿದೆ ಎಂದು ರೇವಣ್ಣ ಹೇಳಿದರು.