ಟಿಬೆಟಿಯನ್ ಶಿಬಿರದಲ್ಲಿ ಶುಂಠಿ ಕಳ್ಳತನ

ನಿಮಗೂ ಗೊತ್ತಿರುವ ಹಾಗೆ ಶುಂಠಿಯ ಬೆಲೆ ಕೈಗೆಟುಕದಷ್ಟು ಮೇಲಕ್ಕೇರಿದೆ. ಹಾಗಾಗಿ ಮೊನ್ನೆಯವರೆಗೆ ಟೊಮೆಟೊ ಕದಿಯುತ್ತಿದ್ದ ಕಳ್ಳರು ಈಗ ಶುಂಠಿ ಕದಿಯಲಾರಂಭಿಸಿದ್ದಾರೆ. ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಟಿಬೆಟಿಯನ್ ಶಿಬಿರದಲ್ಲಿ ಅಲ್ಲಿನ ನಿವಾಸಿಗಳು ಶುಂಠಿ ಬೆಳೆಯುತ್ತಾರೆ. ಕಳ್ಳರು ತೋಟಗಳಿಗೆ ನುಗ್ಗಿ ಶುಂಠಿ ಲೂಟಿ ಮಾಡುತ್ತಿದ್ದಾರೆ.