ಬಿಗ್ ಬಾಸ್ನಲ್ಲಿ ಈ ಬಾರಿ ಗಂಧರ್ವರು ಹಾಗೂ ರಾಕ್ಷಸರು ಎಂದು ಎರಡು ತಂಡಗಳನ್ನು ಮಾಡಲಾಗಿದೆ. ಸ್ನೇಹಿತ್ ಅವರು ತಂಡದ ಕ್ಯಾಪ್ಟನ್ ಆಗಿದ್ದಾರೆ. ಅವರೇ ಟಾಸ್ಕ್ಗಳ ಉಸ್ತುವಾರಿ ವಹಿಸಬೇಕು. ಅವರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ಅದನ್ನು ಅವರು ಪದೇಪದೇ ಸಾಬೀತು ಮಾಡುತ್ತಿದ್ದಾರೆ. ನೀರು ಸೋಕಿ ಎದುರಾಳಿ ತಂಡದವರನ್ನು ಕುರ್ಚಿಯಿಂದ ಎಬ್ಬಿಸುವ ಟಾಸ್ಕ್ ಇತ್ತು. ಈ ವೇಳೆ ಸರಿಯಾಗಿ ಉಸ್ತುವಾರಿ ನಿರ್ವಹಿಸಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ. ನಮ್ರತಾ ಹೇಳಿದ ನಂತರ ಅವರು ನಿರ್ಧಾರ ಬದಲಿಸಿದ್ದಾರೆ. ‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’ ಎಂದು ಕಾರ್ತಿಕ್ ಕೂಗಾಡಿದ್ದಾರೆ.