ಮುಖ್ಯಮಂತ್ರಿ, ವಿಜ್ಞಾನಿಗಳು ಹಾಗೂ ಬೇರೆ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಹರಟಿದರು. ವಿಜ್ಞಾನಿಗಳಲ್ಲೊಬ್ಬರು ಕನ್ನಡತಿ ಅಂತ ಗೊತ್ತಾದಾಗ ಅವರ ತಲೆ ನೇವರಿಸಿ ಆಶೀರ್ವದಿಸಿದರು. ಒಬ್ಬ ಹಿರಿಯ ವಿಜ್ಞಾನಿ ಚಂದ್ರಯಾನ-3 ಲ್ಯಾಂಡಿಂಗ್ ಪ್ರಕ್ರಿಯೆಯನ್ನು ವಿವರಿಸುವಾಗ ಮುಖ್ಯಮಂತ್ರಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ಅವರ ಪ್ರಶ್ನೆಯಿಂದ ಅವಾಕ್ಕಾಗುವ ವಿಜ್ಞಾನಿ ಒಂದರೆಕ್ಷಣ ಬಳಿಕ ಸಾವರಿಸಿಕೊಂಡು ಉತ್ತರ ನೀಡುತ್ತಾರೆ.