ಶಿರಾಡಿಘಾಟ್​ನಲ್ಲಿ ಸುರಂಗ ನಿರ್ಮಾಣ: ಸತೀಶ್ ಜಾರಕಿಹೊಳಿಗೆ ನಿತಿನ್ ಗಡ್ಕರಿ ಸಲಹೆ

ನವದೆಹಲಿ: ಕೇಂದ್ರ ಹೆದ್ದಾರಿ ಸಾರಿಗೆ ಸಚಿವ (Highways Minister) ನಿತಿನ್ ಗಡ್ಕರಿ (Nitin Gadkari) ಜೊತೆಗಿನ ಸಭೆ ಬಳಿಕ ದೆಹಲಿಯಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ( Minister Satish Jarakiholi) ಸುದ್ದಿಗಾರರೊಂದಿಗೆ ಇಂದು ಬುಧವಾರ (ಜುಲೈ 26) ಮಾತನಾಡಿದರು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಬಂದಿದ್ದೇವೆ. ಗೊಂದಲ ಇರುವ ಬಗ್ಗೆ ನಾವು ಪರಿಹಾರ ಕಂಡುಕೊಂಡಿದ್ದೇವೆ. ಸ್ಪಷ್ಟವಾದ ಪ್ರಸ್ತಾವನೆಯೊಂದಿಗೆ ದೆಹಲಿಗೆ ಮತ್ತೊಮ್ಮೆ ಬರುತ್ತೇವೆ.