ದಾವಣಗೆರೆ: ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಅದೇ ಹಳಿಯಲ್ಲಿ ಸಿಲುಕಿದ ವೃದ್ಧ, ಸಮಯಪ್ರಜ್ಞೆ ಮೆರೆದ ಆರ್​ಪಿಎಫ್ ಸಿಬ್ಬಂದಿ

ದಾವಣಗೆರೆ: ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ಗೆ ವಾಸ್ಕೋ ರೈಲು ಆಗಮಿಸುತ್ತಿದ್ದಂತೆ ಹಳಿ ದಾಟಲು ಹೋಗಿ ಹಳಿಯಲ್ಲೇ ಸಿಲುಕಿಕೊಂಡ ವೃದ್ಧನನ್ನು ಆರ್​ಪಿಎಫ್ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ರೈಲು ಬರುತ್ತಿರುವುದನ್ನು ಗಮನಿಸದೇ ನೇರವಾಗಿ ಪ್ಲಾಟ್​ಫಾರ್ಮ್​ನಿಂದ ಹಳಿಗೆ ಇಳಿದ ವೃದ್ಧ ರಂಗಪ್ಪ ಸಮೀಪ ಬಂದ ರೈಲು ನೋಡಿ ಭಯಗೊಂಡು ಮತ್ತೆ ಪ್ಲಾಟ್​ಫಾರ್ಮ್​ಗೆ ಏರಲು ಮುಂದಾಗಿದ್ದಾರೆ. ಅಷ್ಟರಲ್ಲಿ ನೆರವಗಿಗೆ ದಾವಿಸಿದ ಆರ್​ಪಿಎಫ್​ ಕಾನ್​ಸ್ಟೇಬಲ್ ಶಿವಾನಂದ, ವೃದ್ಧನನ್ನು ಎಳೆದು ಹಳಿಯಿಂದ ಹೊರಕ್ಕೆ ಕೊಂಡೊಯ್ದಿದ್ದಾರೆ.