KSRTC ಬಸ್ ಮುಂದೆ ಯುವಕನ ರ್ಯಾಶ್​ ಡ್ರೈವ್​​

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ಕೆಎಸ್ಆರ್ಟಿಸಿ ಬಸ್ ಮುಂದೆ ಡೆಲಿವರಿ ಬಾಯ್ ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸಿದ ಘಟನೆ ವೈರಲ್ ಆಗಿದೆ. ಬಸ್ ಚಾಲಕನ ಮನವಿಗೂ ಕಿವಿಗೊಡದೆ ರಾಶ್ ಡ್ರೈವ್ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.