ಬಿಬಿಎಂಪಿ ಕಚೇರಿಯಲ್ಲಿ ಈಡಿ ಅಧಿಕಾರಿಗಳು

ಬಿಬಿಎಂಪಿಯಲ್ಲಿ ಈಗ ಅಧಿಕಾರಿಗಳದ್ದೇ ಕಾರುಬಾರು. ಪಾಲಿಕೆಯ ಚುನಾವಣೆ ಯಾವಾಗ ನಡೆಸಬೇಕೆಂದು ಕೋರ್ಟ್ ತೀರ್ಮಾನಿಸಲಿದೆ. ಈ ವರ್ಷ ಮೇ ತಿಂಗಳಲ್ಲಿ ಚುನಾವಣೆ ನಡೆಸಲಾಗುವುದೆಂದು ಹೇಳಲಾಗುತ್ತಿದೆಯಾರೂ ಅದಿನ್ನೂ ದೃಢಪಟ್ಟಿಲ್ಲ. ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಆಧಿಕಾರಿಗಳು ಆಡಿದ್ದೇ ಆಟ. ನಗರದ ರಸ್ತೆಗಳಂತೂ ಗಬ್ಬೆದ್ದು ಹೋಗಿವೆ.