ಗಣೇಶ ಉತ್ಸವ ಆಚರಿಸಲು ಅಡಚಣೆ ಉಂಟುಮಾಡುವ ಪ್ರಯತ್ನ ಮತ್ತೊಮ್ಮೆ ಮಾಡಿದರೆ ಮಸೀದಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ವಿವಾದಾತ್ಮಕ ಹೇಳಿಕೆಯನ್ನು ಮುತಾಲಿಕ್ ನೀಡಿದರು. ಸೌಹಾರ್ದತೆಯ ಹಿನ್ನೆಲೆಯಲ್ಲಿ ಹಿಂದೂಗಳು ಇದುವರೆಗೆ ತಾಳ್ಮೆವಹಿಸಿಕೊಂಡು ಬಂದಿದ್ದಾರೆ, ಮುಸಲ್ಮಾನರು ಸಹ ಅದಕ್ಕಾಗಿ ಪ್ರಯತ್ನಿಸಬೇಕು, ಒಂದೇ ಕೈಯಿಂದ ತಟ್ಟಲಾಗದು ಎಂದು ಮುತಾಲಿಕ್ ಹೇಳಿದರು.